ಮಂಗಳವಾರ, ಸೆಪ್ಟೆಂಬರ್ 11, 2012

ಜೋಗಿ



        ಮನಸ್ಸೆಂಬ ಸಮುದ್ರ ಬೇಡದ ಯೋಚನೆಗಳನ್ನು ಬುದ್ಧಿ ತೀರಕ್ಕೆ ತಂದು ಎಸೆಯುತ್ತದೆ. ಹಿಂತಿರುಗಿ ನೋಡಿದರೆ ರಸಹೀನ ಕಬ್ಬಿನ ಜಲ್ಲೆಯಂತೆ ನಿನ್ನೆಗಳ ರಾಶಿ. ಮುಂದಕ್ಕೆ ನೋಡಿದರೆ ಚಾಚಿಕೊಂಡ ಮೂರು ದಾರಿಗಳು. ಬದುಕು ಒಡಂಬಡಿಕೆಯಲ್ಲಿದೆಯೋ, ಈಡೇರಿಕೆಯಲ್ಲಿದೆಯೋ ಎಂಬ ದ್ವಂದ್ವ ನಮ್ಮದು. ಬದುಕಿಗೆ ಉದ್ದೇಶಗಳೇ ಇಲ್ಲ. ಜೀವಮಾನ ಪೂರ್ತಿ ಕ್ಷಣಕ್ಕೋಸ್ಕರ ಕಾಯುತ್ತಿದ್ದೆ ಅನ್ನಿಸುವಂತ ಕ್ಷಣವೊಂದು ಥಟ್ಟನೆ ಹಾಜರಾಗಿ ಬಿಟ್ಟರೆ ಅಲ್ಲಿಗೆ ಮುಕ್ತಿ. ಜ್ಞಾನೋದಯ ಆಗುವತನಕ ಮಾತ್ರ ಹುಡುಕಾಟ ಒಮ್ಮೆ ಅರಿವು ಬೆಳಕಾದರೆ ಆಮೇಲೆ ಅರಿವೇ ಇರುವುದಿಲ್ಲ.

            ಸಂತೋಷವೇ ಬೇರೆ ರೋಚಕತೆಯೇ ಬೇರೆ. ಸಮೂಹದಲ್ಲಿ ಸವಿಯಬಹುದಾದದ್ದು ರೋಚಕತೆ, ಸಂಭ್ರಮ. ಏಕಾಂತದಲ್ಲಿ ಸವಿಯ ಬಹುದಾದದ್ದು ಖುಷಿ.

ಹತ್ತಿರವಾದದ್ದು ನೀರಸವೂ, ದೂರದಲ್ಲಿದ್ದುದು ಆಕರ್ಷಣೆಯೂ ಆಗಿ ಕಾಣುತ್ತದೆ.

          ಸಾವು ಯಾವತ್ತಿದ್ದರೂ ಭಯ ಮತ್ತು ಆಕರ್ಷಣೆ. ಬದುಕು ನಮ್ಮ ಜೊತೆಗಿದ್ದರೂ ಅಪರಿಚಿತ. ನಮಗೆ ನಮ್ಮ ಸತ್ತ-ಬದುಕಷ್ಟೆ ಗೊತ್ತು. ಅಂದರೆ ನಿನ್ನೆಗಳು ಗೊತ್ತು. ಬದುಕುವ ಕ್ಷಣದ ಬಗ್ಗೆ ಗೊತ್ತಿಲ್ಲ. 


ಇಡಿಯಾಗಿದಕ್ಕಿದ್ದು ಯಾವುದೂ ನಮ್ಮದಲ್ಲ.
  ದಕ್ಕುವ ತನಕದ ಹೋರಾಟವೇ ಬದುಕು
      ಜೀವಿಸಿದರೆ ಮಾತ್ರವೇ ಜೀವನ.


3 ಕಾಮೆಂಟ್‌ಗಳು:

  1. ಕಿಶೋರ್, ನಿಮ್ಮ ಬ್ಲಾಗ್ ನೋಡಿ ಖುಷಿಯಾಯಿತು.. ನಿಮ್ಮ ಬರಹಗಳೂ ಸಹ ನಮಗೆ ದಕ್ಕಲಿ.. ಶುಭವಾಗಲಿ ನಿಮಗೆ.. ನಿಮ್ಮ ಫೇಸ್ ಬುಕ್ ಪ್ರೊಫೈಲ್ ಐಡಿಯ ಲಿಂಕ್ ಅಥವಾ ಈ ಮೇಲ್ ವಿಳಾಸ ತಿಳಿಸಿ.. ಶುಭವಾಗಲಿ..

    ಪ್ರತ್ಯುತ್ತರಅಳಿಸಿ
  2. ತುಡಿತವೆ ಜೀವನ. ಆದ್ರೆ ಈ ಸಾಲುಗಳು ಯಾವ ಪುಸ್ತಕದ್ದು ?
    ಹಾಕಿದ್ದರೆ ಕ್ಷಮಿಸಿ ಅವಸರದಲ್ಲಿ ಓದಿದೆ.
    ಸ್ವರ್ಣಾ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಸ್ವರ್ಣ ಅವರೆ "ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ..." ಇವು ಕವಿ ಅಡಿಗರ ಸಾಲುಗಳು...

      ಅಳಿಸಿ