ಗುರುವಾರ, ಮಾರ್ಚ್ 1, 2012

ಕುವೆಂಪು -ಮಲೆನಾಡಿನ ಚಿತ್ರಗಳು. . .



ನೆನಹು ಬಾಳಿನ ಬುತ್ತಿಅನುಭವಗಳ ಅಕ್ಷಯ ನಿಧಿಜೀವನಯಾತ್ರೆ ಬೇಸರವಾದಾಗಜೀವನದಲ್ಲಿ ನವೀನತೆ ಮೊಳೆಯದೆ  ಮಂಕು ಕವಿದಾಗಜೀವನದಲ್ಲಿ ಬಿಸಿಲ ಬೇಗೆ ಹೆಚ್ಚಿ ಬಳಲಿದಾಗಹಾದಿಯ ಬಳಿ ದಟ್ಟವಾಗಿ ಸೊಂಪಿಡಿದು ಬೆಳೆದು ಮರದ  ತನ್ನೆಳಲಿನ ತಂಪಿನಲ್ಲಿ ಮೊರೆದು ಹರಿಯುವ ತೊರೆಯ ಮಂಜುಳ ನಾದವನ್ನು ಆಲಿಸುತ್ತ  ಬುತ್ತಿಯನ್ನು ಬಿಚ್ಚಿ ಉಣಬಹುದುತಣಿಯಬಹುದು.ದಣಿವಾರಿಸಿಕೊಳ್ಳಬಹುದು.ನಮಗೆ ಬೇಕಾದವರು ನಮ್ಮ ಜೀವನಾನುಭಾವಗಳಲ್ಲಿ ಒಲಮೆ ಉಳ್ಳವರು  ಬಳಿಯಿದ್ದರೆ ಅವರಿಗೂ  ಬುತ್ತಿಯ ಪರಿಚಯ ಮಾಡಿಕೊಟ್ಟು ಒಂಟಿಯಾಗಿ ಅನುಭವಿಸುವ ಸುಖವನ್ನು ಇಮ್ಮಡಿಯಾಗಿ  ಅನುಭವಿಸಬಹುದುಆಲಿಸುವವರಲ್ಲಿ  ತಾತ್ಸಾರವಾಗಲಿ , ವ್ಯಂಗ್ಯ  ಪರಿಹಾಸ್ಯವಾಗಲಿ , ಜಿಹ್ವಾಸೆಯಾಗಲಿ , ಜಿಗುಪ್ಸೆಯಾಗಲಿ  ತೋರಿಬಂದರೆ  ಬಾಯಿ  ಮುಚ್ಚಿಕೊಂಡು  ಮನದಲ್ಲಿಯೇ  ಬುತ್ತಿಯೂಟ  ಮಾಡಬಹುದು.

  ಬುತ್ತಿಯಲ್ಲಿ  ಸುಖಗಳಂತೆ  ಕಷ್ಟಗಳೂ ಮನೆ  ಮಾಡಿಕೊಂಡಿರುತ್ತವೆ . ಆದರೆ   ಕಳೆದ  ಕಾಲವು  ಸ್ಮೃತಿಯ  ವಜ್ರ ಪಂಜರದಲ್ಲಿ    ಅನುಭವಗಳನ್ನು  ಬಂಧಿಸಿರುವುದರಿಂದ   ನಮಗೆ  ಅವುಗಳ  ಭಯಂಕರತೆ ಗಿಂತಲೂ ಮನೋಹರತೆಯೇ ಹೆಚ್ಚಾಗಿ  ಎದೆ  ಮುಟ್ಟುತ್ತದೆ  . ಮೃಗಶಾಲೆಯಲ್ಲಿ ಪಂಜರದೊಳಗಿರುವ  ಹುಲಿಯನ್ನೂ  ಗಿಳಿಯನ್ನೂ ನಾವು  ನಿರ್ಭರತೆಯಿಂದ  ನೋಡಿ ಆನಂದ  ಪಡುವಂತೆ  ಕಾಲಪಂಜರದಲ್ಲಿ  ಸಿಕ್ಕಿ ಬಿದ್ದ  ಕಷ್ಟ ಸುಖನುಭಾವಗಳನ್ನು  ಸಮದೃಷ್ಟಿಯಿಂದ  ನೋಡಲು  ಸಮರ್ಥರಾಗುತ್ತೇವೆ . ಒಂದು  ವೇಳೆ  ನಡುಗಿದರೂ  ಬಿಸುಸುಯ್ದರೂ  ಕಂಬನಿಗರೆದರೂ  ರಂಗಭೂಮಿಯಲ್ಲಿ  ರುದ್ರನಾಟಕಗಳನ್ನು ನೋಡಿ  ದುಖಪತ್ತರೂ  ಆನಂದ  ಪಡುವಂತೆ   ಆಗುತ್ತದೆಯೇ    ಹೊರತು  ಕಷ್ಟಗಳನ್ನು  ಸಾಕ್ಷಾತ್ತಾಗಿ  ಅನುಭವಿಸಿದಂತೆ  ಉಗ್ರವಾಗುವುದಿಲ್ಲ . ಆದ್ದರಿಂದ  ನೆನಪಿನಲ್ಲಿ  ಒಂದು  ತೆರನಾದ  ನಿಷ್ಕಾಮತೆಯೂ  ಶಾಂತಿಯೂ   ಇರುತ್ತದೆ . 







5 ಕಾಮೆಂಟ್‌ಗಳು:

  1. hey kishhh... impressed by ur work man.... good work... u have collected alot of information about KUVEMPU...

    ಪ್ರತ್ಯುತ್ತರಅಳಿಸಿ
  2. ನಿಮ್ಮ ಪ್ರಯತ್ನ ಶ್ಲಾಘನೀಯ...ಹೊಸ-ಹೊಸ ವಿಷಯಗಳು ನಿಮ್ಮ ಈ ಪ್ರಯತ್ನಕ್ಕೆ ಮತ್ತಷ್ಟು ಮೆರುಗು ತರಲಿ..

    ಪ್ರತ್ಯುತ್ತರಅಳಿಸಿ
  3. ya its really super le.......keep it up.i will support u ........nimma e prayatna namage santhosha thandide......
    superb ..................~kishore...

    ಪ್ರತ್ಯುತ್ತರಅಳಿಸಿ