ಗುರುವಾರ, ಮಾರ್ಚ್ 1, 2012

ಕುವೆಂಪು -ಮಲೆನಾಡಿನ ಚಿತ್ರಗಳು. . .



ನೆನಹು ಬಾಳಿನ ಬುತ್ತಿ; ಅನುಭವಗಳ ಅಕ್ಷಯ ನಿಧಿ. ಜೀವನಯಾತ್ರೆ ಬೇಸರವಾದಾಗ, ಜೀವನದಲ್ಲಿ ನವೀನತೆ ಮೊಳೆಯದೆ  ಮಂಕು ಕವಿದಾಗ, ಜೀವನದಲ್ಲಿ ಬಿಸಿಲ ಬೇಗೆ ಹೆಚ್ಚಿ ಬಳಲಿದಾಗ, ಹಾದಿಯ ಬಳಿ ದಟ್ಟವಾಗಿ ಸೊಂಪಿಡಿದು ಬೆಳೆದು ಮರದ  ತನ್ನೆಳಲಿನ ತಂಪಿನಲ್ಲಿ ಮೊರೆದು ಹರಿಯುವ ತೊರೆಯ ಮಂಜುಳ ನಾದವನ್ನು ಆಲಿಸುತ್ತ ಆ ಬುತ್ತಿಯನ್ನು ಬಿಚ್ಚಿ ಉಣಬಹುದು. ತಣಿಯಬಹುದು.ದಣಿವಾರಿಸಿಕೊಳ್ಳಬಹುದು.ನಮಗೆ ಬೇಕಾದವರು ನಮ್ಮ ಜೀವನಾನುಭಾವಗಳಲ್ಲಿ ಒಲಮೆ ಉಳ್ಳವರು  ಬಳಿಯಿದ್ದರೆ ಅವರಿಗೂ ಆ ಬುತ್ತಿಯ ಪರಿಚಯ ಮಾಡಿಕೊಟ್ಟು ಒಂಟಿಯಾಗಿ ಅನುಭವಿಸುವ ಸುಖವನ್ನು ಇಮ್ಮಡಿಯಾಗಿ  ಅನುಭವಿಸಬಹುದು. ಆಲಿಸುವವರಲ್ಲಿ  ತಾತ್ಸಾರವಾಗಲಿ , ವ್ಯಂಗ್ಯ  ಪರಿಹಾಸ್ಯವಾಗಲಿ , ಜಿಹ್ವಾಸೆಯಾಗಲಿ , ಜಿಗುಪ್ಸೆಯಾಗಲಿ  ತೋರಿಬಂದರೆ  ಬಾಯಿ  ಮುಚ್ಚಿಕೊಂಡು  ಮನದಲ್ಲಿಯೇ  ಬುತ್ತಿಯೂಟ  ಮಾಡಬಹುದು.

ಆ  ಬುತ್ತಿಯಲ್ಲಿ  ಸುಖಗಳಂತೆ  ಕಷ್ಟಗಳೂ ಮನೆ  ಮಾಡಿಕೊಂಡಿರುತ್ತವೆ . ಆದರೆ   ಕಳೆದ  ಕಾಲವು  ಸ್ಮೃತಿಯ  ವಜ್ರ ಪಂಜರದಲ್ಲಿ  ಆ  ಅನುಭವಗಳನ್ನು  ಬಂಧಿಸಿರುವುದರಿಂದ   ನಮಗೆ  ಅವುಗಳ  ಭಯಂಕರತೆ ಗಿಂತಲೂ ಮನೋಹರತೆಯೇ ಹೆಚ್ಚಾಗಿ  ಎದೆ  ಮುಟ್ಟುತ್ತದೆ  . ಮೃಗಶಾಲೆಯಲ್ಲಿ ಪಂಜರದೊಳಗಿರುವ  ಹುಲಿಯನ್ನೂ  ಗಿಳಿಯನ್ನೂ ನಾವು  ನಿರ್ಭರತೆಯಿಂದ  ನೋಡಿ ಆನಂದ  ಪಡುವಂತೆ  ಕಾಲಪಂಜರದಲ್ಲಿ  ಸಿಕ್ಕಿ ಬಿದ್ದ  ಕಷ್ಟ ಸುಖನುಭಾವಗಳನ್ನು  ಸಮದೃಷ್ಟಿಯಿಂದ  ನೋಡಲು  ಸಮರ್ಥರಾಗುತ್ತೇವೆ . ಒಂದು  ವೇಳೆ  ನಡುಗಿದರೂ  ಬಿಸುಸುಯ್ದರೂ  ಕಂಬನಿಗರೆದರೂ  ರಂಗಭೂಮಿಯಲ್ಲಿ  ರುದ್ರನಾಟಕಗಳನ್ನು ನೋಡಿ  ದುಖಪತ್ತರೂ  ಆನಂದ  ಪಡುವಂತೆ   ಆಗುತ್ತದೆಯೇ    ಹೊರತು  ಕಷ್ಟಗಳನ್ನು  ಸಾಕ್ಷಾತ್ತಾಗಿ  ಅನುಭವಿಸಿದಂತೆ  ಉಗ್ರವಾಗುವುದಿಲ್ಲ . ಆದ್ದರಿಂದ  ನೆನಪಿನಲ್ಲಿ  ಒಂದು  ತೆರನಾದ  ನಿಷ್ಕಾಮತೆಯೂ  ಶಾಂತಿಯೂ   ಇರುತ್ತದೆ . 







5 ಕಾಮೆಂಟ್‌ಗಳು:

  1. hey kishhh... impressed by ur work man.... good work... u have collected alot of information about KUVEMPU...

    ಪ್ರತ್ಯುತ್ತರಅಳಿಸಿ
  2. ನಿಮ್ಮ ಪ್ರಯತ್ನ ಶ್ಲಾಘನೀಯ...ಹೊಸ-ಹೊಸ ವಿಷಯಗಳು ನಿಮ್ಮ ಈ ಪ್ರಯತ್ನಕ್ಕೆ ಮತ್ತಷ್ಟು ಮೆರುಗು ತರಲಿ..

    ಪ್ರತ್ಯುತ್ತರಅಳಿಸಿ
  3. ya its really super le.......keep it up.i will support u ........nimma e prayatna namage santhosha thandide......
    superb ..................~kishore...

    ಪ್ರತ್ಯುತ್ತರಅಳಿಸಿ